KSRTC

K.S.R.T.C ಯವರ ಕನ್ನಡ ವಿರೋದಿ ತನವನ್ನ ಒಂದು ವರ್ಶದ ಕೆಳಗೆ ಇದೇ ಸಂಸ್ತೆಯವರು ಕನ್ನಡದ ವೆಬ್ ಸೈಟ್ ಅನ್ನು ಒಂದು ತಿಂಗಳ ಒಳಗೆ ಬಿಡುಗಡೆ ಮಾಡ್ತಿವಿ ಅಂತ ಹೇಳಿದ್ರು ಅವರ ಪೇಸ್ ಬುಕ್ಕಿನ ಪುಟದಲ್ಲಿ ಹಲವಾರು ಜನರ ಒತ್ತಡದಿಂದಾಗಿ, ಹಾಗೂ ಹೀಗೂ ಮಾಡಿ ಒಂದು ತಿಂಗಳು ಅಲ್ಲ, ಒಂದು ವರ್ಶ ಆದಮೇಲೆ ಕಾಟಾಚಾರಕ್ಕೆ ಒಂದು ವೆಬ್ ಸೈಟ್ ಮಾಡಿ ಕನ್ನಡ ವಿರೋದಿತನವನ್ನ ಮೆರೆದಿದ್ದಾರೆ. ಇದು ಹೆಸರಿಗೆ ಮಾತ್ರ ಕನ್ನಡ ವೆಬ್ ಸೈಟ್ ಮೇಲೆ ಕನ್ನಡ ಒಳಗೆ ಹೋದಂತೆಲ್ಲ ಇಂಗ್ಲೀಶ್ ವೆಬ್ ಸೈಟ್ ಗೆ ಕೊಂಡಿ ನೀಡಿದ್ದಾರೆ ಇದಕ್ಕಿಂತ ಒಂದು ಆತಂಕ ಕಾರಿ ವಿಶಯ ಅಂದ್ರೆ ಕನ್ನಡದ ವೆಬ್ ಸೈಟ್ default ಆಗೋಗು ಹೋಗಲಿ ಕನ್ನಡ ವೆಬ್ ಸೈಟ್ ನ ಲಿಂಕ್ ಮುಕ್ಯ ಪುಟದಲ್ಲಿ ದುರ್ಬಿನ್ ಹಾಕಿ ಹುಡುಕಿದ್ರು ಸಿಗಲ್ಲ. ಕನ್ನಡದ ವೆಬ್ ಸೈಟ್ ಅನ್ನು ಈ ಸಂಸ್ತೆಯವರು ಉದ್ದೇಶಪೂರ್ವಕವಾಗಿಯೇ ಜನರಿಗೆ ಸಿಗದ ಹಾಗೆ ಮಾಡಿದ್ದಾರೆ. ತಂತ್ರಜ್ನಾನದಲ್ಲಿ ಕನ್ನಡ ಮುಂದುವರೆದಿದ್ದು ಕನ್ನಡದ ವೆಬ್ ಸೈಟ್ ಮಾಡಿ ಕನ್ನಡಿಗರಿಗೆ ಪರಿಣಾಮಕಾರಿಯಾಗಿ ಸೇವೆ ಒದಗಿಸುವುದನ್ನ ಈ ಅದಿಕಾರಿಗಳು ಕಲಿಯಬೇಕಿದೆ ಅಲ್ವ.

ಕನ್ನಡದಲ್ಲಿ ಸರಿಯಾದ ವೆಬ್ ಸೈಟ್ ನಿರ್ಮಿಸಿ ಅದನ್ನೆ default ಬಾಶೆಯನ್ನಾಗಿ ರೂಪಿಸಬೇಕೆಂದು ಅವರ ಪೇಸ್ ಬುಕ್ ಪುಟದಲ್ಲಿ ಒತ್ತಾಯಿಸೋಣ-
Share this article :
 
 
Copyright © 2011. VigZing - All Rights Reserved
Proudly powered by VigZing