ಬ್ರಷ್ಟಾಚಾರದ ಮೂಲ

ಭಾರತದ ಪ್ರಸ್ತುತ ವಿದ್ಯಾಮಾನವನ್ನು ಗಮನಿಸಿದಾಗ ದೇಶದೆಲ್ಲೆಡೆ ಬ್ರಷ್ಟಾಚಾರ, ಅಸಮಾನತೆ,ಬಂಡವಾಳಶಾಹಿ,ಬಡತನ,ನಿರುದ್ಯೋಗ ರಾಜಕೀಯ ದುರೀಣರ ದಬ್ಬಾಳಿಕೆ ಮುಂತಾದ ಸಾವಿರಾರು ಸಮಸ್ಯೆಗಳ ಸುಳಿಯಲ್ಲಿ ಭಾರತ ಹಾಗೂ ವಿಶ್ವವೇ ಬಲಿಯಾಗುತ್ತಿದೆ, ಅದರಲ್ಲೂ ನಮ್ಮ ದೇಶ ಮೇಲಪಂಕ್ತಿಯ ಸಾಲುಗಳಲ್ಲಿ ನಿಲ್ಲುತ್ತದೆ. ಇದಕ್ಕೆ ಕಾರಣವೇನು? ಇದರ ಹುಟ್ಟಿನ ಮೂಲ ಅಂಶಗಳಾವು? ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟುವುದು ಪ್ರಸಕ್ತ ವಿದ್ಯುನ್ಮಾನದಲ್ಲಿ ಸರ್ವೇ ಸಾಮಾನ್ಯವಾಗಿವೆ, ಈ ದೃಷ್ಠಿಯಲ್ಲಿ ನನ್ನ ಎರಡುವರೆ ದಶಕಗಳ ಜೀವನದ ಹೆಜ್ಜೆಯಲ್ಲಿ ಕಂಡ ಅಂಶಗಳಲ್ಲಿ ಮೊದಲಿಗೆ ಬ್ರಷ್ಟಾಚಾರದ ಮೊದಲ ಸಂಕ್ಷಿಪ್ತ ರೂಪ ಲಂಚತನ, ಈ ಲಂಚತನದ ಅರಿವು ನನ್ನ ಗಮನಕ್ಕೆ ಬಂದಿದ್ದು ನಾನು ಮೊದಲಬಾರಿಗೆ ಕಾಲೇಜು ಶಿಕ್ಷಣಕ್ಕಾಗಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರ ತೆಗೆಸಲು ಹೋದ ಸಂದರ್ಭದಲ್ಲಿ ಗ್ರಾಮ ಲೆಕ್ಕಪಾಲಿಗ, ತಹಶೀಲ್ದಾರ ಕಚೇರಿಯ  ಗುಮಾಸ್ತರಿಗೆ 10,20 ರುಪಾಯಿಗಳಂತೆ ಕೊಟ್ಟು ಕೆಲಸ ಬೇಗ ಮಾಡಿಸಿಕೊಂಡ ಉದಾಹರಣೆಗಳನ್ನು ಬೇಕಾದಸ್ಟು ಕಂಡಿದ್ದೇವೆ ಮತ್ತು ಇವತ್ತು ಕೂಡ ಕಾಣುತ್ತಿದ್ದೇವೆ. ಮತ್ತೆ   ಹೊಲದ ಪಾಣಿ, ವಾಟ್ನಿ ಇತ್ಯಾದಿ ಪ್ರಮಾಣ ಪತ್ರಗಳನ್ನು ಪಡೆಯಲು 100 ರೂಪಾಯಿಗೂ ರುಪಾಯಿಗಳನ್ನು ಕೊಟ್ಟು ಪ್ರಮಾಣ ಪತ್ರಗಳನ್ನು ತೆಗೆಸಿಕೊಳ್ಳುತ್ತಿರುವುದು, ಅನೇಕರ ನೋವಿನಿಂದ ಬಂದ ನುಡಿಗಳೇ ಸಾಕ್ಷಿಯಾಗಿವೆ, ಯಾವುದೋವೊಂದು ಕಾರ್ಯಕ್ಕೆ ಯಾವುದೇ ಇಲಾಖೆಯ ಕಚೇರಿಗಳಿಗೆ ಹೋದಾಗ  ಅಲ್ಲಿ ನಮಗೆ ತುರ್ತಾಗಿ ಬೇಕಾದ  ಕಾಗದ ಪತ್ರಗಳನ್ನು ಕೊಡಲು ವಿನಂತಿಸಿದರೆ ಇಲ್ಲದೊಂದು ನಿಯಮಗಳನ್ನು ಹೇಳಿ ಕಚೇರಿಗೆ ಅಲೆದಾಡಿಸುವ ಕಾರ್ಯಕ್ಕೆ ಹಚ್ಚುತ್ತಾರೆ. ಆದರೆ ಒಂದು ಕಪ್ ಚಹಾ ಹಾಗೂ ಕೇಳಿದ ಹಣ ನೀಡಿದಾಗ  ಯಾವುದೇ ನಿಯಮಗಳಿಲ್ಲದೇ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರಿಗಳು ಇವತ್ತು ತುಂಬಿ ತುಳುಕುತಿದ್ದಾರೆ. ಪೋಲಿಷ್ ಇಲಾಖೆಯಲ್ಲಿ   ಇಂದು ಅನೇಖ ಜನ ಪೋಲಿಷ ಕಾನ್ಸೇಬಲ್ ಸರ್ಕಲಸಾಬ, ಪಿ.ಎಸ್.ಆಯ್, ಎಸ್.ಪಿ ಹೀಗೆ ಅನೇಕ ಅಧಿಕಾರಿಗಳು ತಾವು ಆಯ್ಕೆ ಆದಾಗ ಲಂಚ ನೀಡಿದ ಹಣದ ಮರುಗಳಿಕೆಗಾಗಿ ಲಂಚತೆಗೆದುಕೊಳ್ಳುವ ಅನೇಕರನ್ನು ಕಾಣುತ್ತಿದ್ದೇವೆ. ಈ ರೀತಿಯ ಎಲ್ಲಾ ಕಾರ್ಯಕ್ಕೆ ಲಂಚಕೊಟ್ಟು ಕೆಲಸ ಬೇಗ ಮಾಡಿಸಿಕೊಳ್ಳುವ ಮನೋಭಾವದ ನಾವುಗಳೇ ಕಾರಣವಲ್ಲವೆ?
ಈ ಲಂಚತನದ ಪರಮಾವದಿ ಬ್ರಸ್ಟಾಚಾರದ ಮೂಲ ಹತ್ತಿಕ್ಕಲು ಜನ್ ಲೋಕ ಪಾಲ  ಮಸುದೆ ಜಾರಿಗೆಗಾಗಿ ನಾವುಗಳೆ ಇಂದು ಮುಂದಾಗಿ ಅಣ್ಣಾ ಹಜಾರಿಯವರ ನೇತೃತ್ವದಲ್ಲಿ ನಾವು, ನಾವೇ ಸೃಸ್ಟಡಸಿದ  ಪಂಜರದಿಂದ ಮುಕ್ತವಾಗಲು ಅಂಗಳಕ್ಕೆ ಬನ್ನಿ.
Share this article :
 
 
Copyright © 2011. VigZing - All Rights Reserved
Proudly powered by VigZing